Good News

“ನಾನೂ ನನ್ನ ಮೋಬೈಲ್ ಬರೆಹವೂ” Claim

0 / 5
Compare Add to favorites Print

“ಇದೇನು, ರವಿಚಂದ್ರನ್ ಸಿನೇಮಾ “ನಾನು ನನ್ನ ಹೆಂಡ್ತಿರು” ಥರ “ನಾನೂ ನನ್ನ ಮೋಬೈಲ್ ಬರೆಹವೂ” ಎನ್ನುತ್ತಿದ್ದೀರಲ್ಲ” ಎಂದಿರಾ? ಆ “ಭಾಗ್ಯ ಅವರಿಗೇ ಇರಲಿ!

ಈಗ  ಮೋಬೈಲ್ ಬರೆಹಗಳಲ್ಲಿ ಉಂಟಾಗುವ ಎಡವಟ್ಟುಗಳ ಬಗ್ಗೆ ಸ್ವಲ್ಪ ಬರೆಯಬೇಕೆನಿಸಿದೆ – ಅದೂ ಮೋಬೈಲ್ ಮೂಲಕವೇ!

ನಿಮಗೆಲ್ಲ ಗೊತ್ತಿರುವ ಹಾಗೆ ಇತ್ತೀಚಿನ ಎಲ್ಲ “ಸುಂದರ ಚರವಾಣಿ”(smartphone) ಗಳಲ್ಲಿ ನಾವು ಏನಾದರೂ ಟಂಕಿಸುತ್ತಿದ್ದರೆ ಕೆಲವೊಂದು ಪದಗಳನ್ನು ತಾನೇ ಊಹಿಸಿ ಟಂಕಿಸುತ್ತದೆ. ಉದಾಹರಣೆಗೆ phone ಎಂದು ಇಂಗ್ಲಿಷಿನಲ್ಲಿ ಮುದ್ರಿಸಬೇಕಿದ್ದರೆ ನೀವು ಕೇವಲ ph ಎಂದು ಎರಡಕ್ಷರ ಟಂಕಿಸಿದರೆ ಸಾಕು. ಮುಂದಿನ ಲಿಪಿಯನ್ನು ತಂತಾನಾಗಿಯೇ ಮುದ್ರಿಸಲ್ಪಡುತ್ತದೆ. ಇದು ಅತ್ಯಾಧುನಿಕ ಸೌಲಭ್ಯವೆಂದುಕೊಂಡರೂ ಕೆಲವೊಂದು ಸಲ ಎಡವಟ್ಟುಗಳನ್ನು ನಿರ್ಮಿಸಿ ಬಿಡುತ್ತದೆ.

ಒಮ್ಮೆ ಒಂದು ವಾಟ್ಸಾಪ್ಪಿನ ಸಂಚಾಲಕರೊಬ್ಬರು I will message everyone ಎಂದು ಟಂಕಿಸಬೇಕಿತ್ತು. ಆದರೆ ಅವರು ಗಡಿಬಿಡಿಯಲ್ಲಿ mas ಎಂದು ಟಂಕಿಸಿದಾಕ್ಷಣವೇ ಅದು  massage ಎಂದು ತಂತಾನಾಗಿಯೇ ಊಹಿಸಿ ಮುದ್ರಿಸಿಕೊಂಡಿತು! ಅದು ಎಂಥ ಅನರ್ಥಕ್ಕೆಡೆಮಾಡಿಕೊಟ್ಟಿತು ಎಂದು ಬೇರೆ ಹೇಳಬೇಕಾಗಿಲ್ಲ!!

ನಾನು ಒಮ್ಮೆ ಮಹಿಳಾ ಡಾಕ್ಟರ್ರೊಬ್ಬರನ್ನು ಅಭಿನಂದಿಸಬೇಕಿತ್ತು. “ಡಾ. ಶಶಿಕಲಾ ಅಭಿನಂದನೆಗಳು” ಎಂದು ಮುದ್ರಸಿದರೆ “ಬಾ. ಶಶಿಕಲಾ ಅಭಿನಂದನೆಗಳು” ಎಂದು ಮುದ್ರಣವಾಗಿ ಅವಾಂತರವೇ ಸೃಷ್ಟಿಯಾಗಿತ್ತು! ಕೇವಲ ‘ಆ’ ಬರೆಯಬೇಕಿದ್ದರೂ ‘ಆದರೆ’ ಎಂದೋ, ‘ಆಯಿ’ಯನ್ನು ‘ಆಯಿತು’ ಎಂದೋ ಊಹಿಸಿ ಬಿಡುತ್ತದೆ ಈ ಚರವಾಣಿ!(ಚಮತ್ಕಾರ ವಾಣಿ).

ಇನ್ನೊಂದು ಈ ಚರವಾಣಿಯ ಪ್ರಳಯಾಂತಕಾರಿ ಊಹೆ ಏನೆಂದರೆ, ‘ಮಾಮಾರಿ’ ಎಂದು ಮುದ್ರಿಸಿದರೆ ಸಾಕು, ಅದು ‘ಮಾರಾಮಾರಿ’ ಎಂದು ಊಹಿಸಿ ಬಿಡುತ್ತಿದೆ. ಆದ್ದರಿಂದ ಎಲ್ಲ ಸಹೃದಯಿ ಓದುಗರು ಈ ಅವಾಂತರಕಾರಿ ಊಹಾಪೋಹಗಳನ್ನು ಸಹಿಸಿ ಮನ್ನಿಸಬೇಕೆಂದು ಸವಿನಯ ಪ್ರಾರ್ಥನೆ.

ಇದೀಗ ತಾನೆ ‘ಮನ್ನಿಸಬೇಕು’ ಎಂದು ಮುದ್ರಿಸುತ್ತಿದ್ದರೆ, ‘ತಿನ್ನಿಸಬೇಕು’ ಎಂದು ಊಹಿಸಿದೆ!!?? ಈಗ ನೀವೇ ಹೇಳಿ ನನ್ನದೇನಾದರೂ ತಪ್ಪಿದೆಯೇ?

  • Listing categories People / Blogs
  • Date October 11, 2017
  • Time 12:30 PM
  • Person Ravindra Munnolimath

Post New Review

Continue READING

Random News articles from our database.