Good News

ಯಾರೆ ನಂಬಲಿ ಬಿಡಲಿ ಮೋದಿಯವರಷ್ಟೆ ನಮ್ಮ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪ್ರಾಮಾಣಿಕ! Claim

0 / 5
Compare Add to favorites Print

ಮೋದಿಯವರು ಸರಳರು, ಶುದ್ಧಹಸ್ತರು, ದೇಶಭಕ್ತರು, ದೇಶಕ್ಕಾಗಿ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂಬ ತುಡಿತವನ್ನಿಟ್ಟುಕೊಂಡವರು ಎಂಬುವುದರಲ್ಲಿ ಎರಡು ಮಾತಿಲ್ಲ. ಚುನಾವಣಾ ಪೂರ್ವದಲ್ಲಿ ಭಾಜಪ ಮೋದಿಯವರೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ರಾಜಕೀಯ ಚಾತುರ್ಯವನ್ನು ಪ್ರದರ್ಶಿಸಿತಲ್ಲದೇ “ಹರ ಹರ ಮೋದಿ” ಎಂಬ ಘೋಷ ವಾಕ್ಯವನ್ನು ಯುವ ಜನಾಂಗದಲ್ಲಿ ಪ್ರವಹಿಸಿ ಅವರಲ್ಲಿ ರೋಮಾಂಚನವನ್ನುಂಟು ಮಾಡಿತು.

“ಅಬ್ ಕಿ ಸರ್ಕಾರ್ ಮೋದಿ ಸರ್ಕಾರ್” ಘೋಷಣೆಗಳು ದೇಶಾದ್ಯಂತ ಮೊಳಗಿದವು. ಪ್ರತಿಫಲವೆಂಬಂತೆ ನಿರೀಕ್ಷೆಗೂ ಮೀರಿ ಭಾರತೀಯರು ಬಹುಮತವನ್ನು ನೀಡಿ ನರೇಂದ್ರ ಮೋದಿ ನೇತೃತ್ವದ ಭಾಜಪಕ್ಕೆ ಸರ್ಕಾರ ರಚನೆಗೆ ಅವಕಾಶವನ್ನೂ ನೀಡಿಯೂ ಆಯಿತು. ಸರ್ಕಾರ ರಚಿಸುವಷ್ಟು ಸ್ಪಷ್ಟ ಬಹುಮತ ಪಕ್ಷಕ್ಕೆ ದಕ್ಕಿದರೂ ಮೊದಲೇ ಎನ್ ಡಿ ಎ ಎಂಬ ಮೈತ್ರಿಕೂಟ ರಚನೆಯಾಗಿದ್ದರಿಂದ ಮೋದಿಯವರು ಆ ಮಿತ್ರ  ಪಕ್ಷಗಳನ್ನು ಗೌರವದಿಂದ ಕಂಡು ಸ್ನೇಹ ಧರ್ಮವನ್ನು ಪಾಲಿಸಿ ತಮ್ಮ ಗೌರವವನ್ನು ಇನ್ನಷ್ಟು ಹೆಚ್ಚಿಸಿಕೊಂಡರು.

ಇಷ್ಟೆಲ್ಲ ಒಂದು ಭಾಗವಾದರೆ ಮುಂದಿನದು ಇನ್ನೊಂದು ಭಾಗ. ಅಲ್ಲಿಂದ ಇಲ್ಲಿಯವರೆಗೆ ಮೋದಿಯವರು ತಮ್ಮ ಅಧಿಕಾರಾವಧಿಯ ಶೇಕಡಾ ಎಪ್ಪತ್ತು ಭಾಗ ಪೂರೈಸಿದ್ದಾರೆ. ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ? ಕಟ್ಟಕಡೆಯ ವ್ಯಕ್ತಿಗೆ ಮೋದಿಯವರ ಸರ್ಕಾರದಿಂದ ಏನು ಪ್ರಯೋಜನವಾಗಿದೆ? ಮೊದಲು ಯೋಗ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿ ಪ್ರಚಾರ ದಕ್ಕಿಸಿಕೊಂಡರು. ನಂತರ ನೋಟು ಅಪನಗದೀಕರಣ ಆಮೇಲೆ ಸ್ವಚ್ಛ ಭಾರತ ತದನಂತರ ‘ಸರ್ಜಿಕಲ್ ಸ್ಟ್ರೈಕ್’ , ಅದೂ ಆದಮೇಲೆ ಜಿಎಸ್ ಟಿ. ಈ ಎಲ್ಲ ಧೋರಣೆಗಳಿಂದ ಶ್ರೀ ಸಾಮಾನ್ಯನಿಗೆ ಆದ ಲಾಭವೇನು? ಏತನ್ಮಧ್ಯೆ ‘ನಗದುರಹಿತ’ ವ್ಯವಹಾರ ಘೋಷಿಸಿ ಸಾಮಾಜಿಕ ಕ್ರಾಂತಿ ಉಂಟು ಮಾಡುವ ಯೋಜನೆಯೂ ಠುಸ್ ಆಯಿತು. ಕಪ್ಪು ಹಣವೆಂದು ಸಾವಿರಾರು ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ಮಾಡಿದ್ದಾದರೂ ಏನು? ಇದೂ ಒಂದು ರಾಜಕೀಯ ಪ್ರೇರಿತ ಭಯೋತ್ಪಾದನೆಯೇ ಆಯಿತು ವಿನ: ಮತ್ತೇನೂ ಆಗಲಿಲ್ಲ. ಮೊನ್ನೆ ಮೊನ್ನೆ ನಡೆದ ಗಾಂಧಿ ಜಯಂತಿ ದಿನಾಚರಣೆ ಸಂದರ್ಭದಲ್ಲಿ ಮೋದಿಯವರು “ಪ್ರತಿ ಪ್ರಜೆಯೂ ಭಾಗವಹಿಸದೆ ಸಾವಿರ ಗಾಂಧಿ, ಲಕ್ಷ ಮೋದಿ ಬಂದರೂ ಸ್ವಚ್ಛ ಭಾರತ ಸಾಧ್ಯವಿಲ್ಲ.” ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ನಡುನಡುವೆ ಕಾಶ್ಮೀರ ಕಣಿವೆಯಲ್ಲಿ ಶಾಂತಿ ನೆಲೆಗೊಂಡಂತೆ ಕಂಡರೂ ಈಗ ಮತ್ತೆ ಕ್ಷೋಭೆ ತಾಂಡವವಾಡುತ್ತಿದೆ. ಬೆಲೆ ಏರಿಕೆಗೆ ಕಡಿವಾಣವಿಲ್ಲದಂತಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಭಯ ಬೀಳಿಸುತ್ತಿದೆ. ಇಂಥವನೆಲ್ಲ ಪ್ರಶ್ನಿಸುವವರನ್ನು ದೇಶದ್ರೋಹಿಗಳಂತೆ ನೋಡಲಾಗುತ್ತಿದೆ.

ಇಲ್ಲಿಯವರೆಗೆ ಒಮ್ಮೆಯೂ ಕಾಂಗ್ರೆಸ್ ಪಕ್ಷಕ್ಕೆ ನಾನು ಮತದಾನ ಮಾಡಿಲ್ಲ. ಮುಂದೆಯೂ ಮಾಡಬೇಕೆಂದು ಅನ್ನಿಸುತ್ತಿಲ್ಲ. ಹೀಗಾಗಿ ಇದು ಕಾಂಗ್ರೆಸ್ ಪಕ್ಷದ ಪಿತೂರಿಯಿಂದ ಬಂದ ಅಭಿಪ್ರಾಯವೆಂದು ಯಾರೂ ಭಾವಿಸಬೇಕಾಗಿಲ್ಲ. ಮೋದಿಯವರನ್ನು ಮೆಚ್ಚುತ್ತಲೇ ಅವರ ವೈಫಲ್ಯಗಳನ್ನು ಎತ್ತಿ ತೋರಿಸಿ ಅವರನ್ನು ಸರಿದಾರಿಗೆ ತರುವ ರಾಜಕೀಯ ಪ್ರಜ್ಞೆಯೂ ನಮ್ಮಲ್ಲಿ ಕೆನೆಗಟ್ಟಲಿ. ಏಕೆಂದರೆ ಭ್ರಮೆ ದಿನಗಳ ಆಯಸ್ಸು ತೀರ ಅಲ್ಪ!

ಕೊನೆಯಲ್ಲೊಂದು ಮಾತು: ಯಾರೆ ನಂಬಲಿ ಬಿಡಲಿ ಮೋದಿಯವರಷ್ಟೆ ನಮ್ಮ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪ್ರಾಮಾಣಿಕ!

  • Person Ravindra Munnolimath

Post New Review

Continue READING

Random News articles from our database.